ಹಾಸನ: ಅಂದರ್ ಬಾಹರ್ ಜೂಜಾಡುತ್ತಿದ್ದ ೧೧ ಜನರನ್ನು ಬಂಧಿಸಿರುವ ಡಿಸಿಆರ್‌ಬಿ ಪೊಲೀಸರು, ಪಣಕ್ಕಿಟ್ಟಿದ್ದ ೨೦,೦೧೫೮೦ ರೂ. ನಗದು ವಶ ಪಡಿಸಿಕೊಂಡಿದ್ದಾರೆ. ಸೆ.೧೧ ರಂದು ರಾತ್ರಿ ೯.೩೦ ಗಂಟೆಯಲ್ಲಿ ಉದ್ದೂರು ಗ್ರಾಮದ ಹತ್ತಿರ ಇರುವ ಲೇಔಟ್ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಹಣ ಪಣವಾಗಿಟ್ಟು ಅಂದರ್ ಬಾಹರ್ ಜೂಜಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಡಿಸಿಆರ್‌ಬಿ ಇನ್ಸ್ಪೆಕ್ಟರ್ ವಿನಯ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ೧೧ ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಸಕಲೇಶಪುರ, ಅರಸೀಕೆರೆ, ನಾಗಮಂಗಲ, ತಿಪಟೂರು, ಕಡೂರು ಹಾಗೂ ಹಾಸನದವರಾಗಿದ್ದಾರೆ. ಈ ಸಂಬAಧ ಪೆನ್‌ಶೆನ್ ಮೊಹನ್ನಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.