ವಿರಾಜಪೇಟೆ, ಐತಿಹಾಸಿಕ ಗೌರಿ ಗಣೇಶ ಉತ್ಸವ ಕ್ಕೆ ಸಂಪ್ರದಾಯಕವಾಗಿ ಚಾಲನೆ ದೊರಕ್ಕಿದೆ, ನಗರದ ಜೈನರ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವಾಲಯ ದ ವತಿಯಿಂದ ಗೌರಿ ಯನ್ನು ನೆಲ್ಲಮಕ್ಕಂಡ ಮೋಹನ್ ರವರಿಗೆ ಸೇರಿದ ಕೆರೆಯಲ್ಲಿ ಪೂಜೆ ಸಲ್ಲಿಸಿ ನಗರದ ಪ್ರಮುಖ ಬೀದಿಯಲ್ಲಿ ಪಲ್ಲಕ್ಕಿ ಉತ್ಸವ ನಡೆಸಲಾಯಿತು ,ಮಹಿಳೆಯರು ಹೆಣ್ಣು ಮಕ್ಕಳು ದೇವಿಗೆ ಹರಿಶಿನ ಕುಂಕುಮ ನೀಡಿ ಪೂಜೆ ಸಲ್ಲಿಸಿದರು ,ನಗರದಲ್ಲಿ ಪಲ್ಲಕ್ಕಿ ಉತ್ಸವ ನಡೆಸಿ ರಾತ್ರಿ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು, ಬುಧವಾರ ಬೆಳಿಗ್ಗೆ ಗಣೇಶ ನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗವುದು ಇದರೊಂದಿಗೆ ಹನ್ನೊಂದು ದಿನಗಳ ಕಾಲ ನಡೆಯುವ ಐತಿಹಾಸಿಕ ಗೌರಿ ಗಣೇಶ ಉತ್ಸವದಲ್ಲಿ ಕ್ಕೆ ಚಾಲನೆ ದೊರಕಿದಂತೆ ಆಗಿದೆ