ಚಿಂಚೋಳಿ ತಾಲೂಕಿನ ಜಿಲವರ್ಷಾ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದ ಲಿಂಗಪ್ಪ ಪೂಜಾರಿ ಅವರಿಗೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಭವ್ಯವಾದ ಸನ್ಮಾನವನ್ನು ಆಯೋಜಿಸಿದರು. ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ತೆರೆದ ವಾಹನದಲ್ಲಿ ನೆಚ್ಚಿನ ಶಿಕ್ಷಕ ಲಿಂಗಪ್ಪ ಪೂಜಾರಿ ಅವರಿಗೆ ಊರಿನ ಮುಖ್ಯ ಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ವಿದ್ಯಾರ್ಥಿಗಳು ಕೈಯಲ್ಲಿ ಹೂಗುಚ್ಛಗಳು, ಬಾವುಟಗಳನ್ನು ಹಿಡಿದು ನೆಚ್ಚಿನ ಶಿಕ್ಷಕನಿಗೆ ಗೌರವ ಸಲ್ಲಿಸಿದರು. ಗ್ರಾಮದ ಹಿರಿಯರು, ಮಹಿಳೆಯರು ಹಾಗೂ ಯುವಕರು ಕೂಡ ಹರ್ಷಭರಿತವಾಗಿ ಪಾಲ್ಗೊಂಡು ತಮ್ಮ ಪ್ರೀತಿಯ ಶಿಕ್ಷಕರಿಗೆ ಗೌರವ ತೋರಿದರು.