ಧರ್ಮಸ್ಥಳ ಕ್ಷೇತ್ರ ರಾಜಕೀಯ ವಿಷಯವಲ್ಲ, ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿರುವವರಿಗೆ ನಾಚಿಕೆಯಾಗಬೇಕು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ. ಸೆಪ್ಟೆಂಬರ್ 3ರಂದು ಬೆಳಿಗ್ಗೆ 11 ಗಂಟೆಗೆ ಸದಾಶಿವನಗರದಲ್ಲಿ ಮಾತನಾಡಿದ ಅವರು,'ಸೌಜನ್ಯ ಪ್ರಕರಣ ಸೇರಿದಂತೆ ಬೇರೆ ಆರೋಪಗಳೇನಿವೆ ಅವು ನಮ್ಮ ಸರ್ಕಾರ ಆಡಳಿತಕ್ಕೆ ಬರುವ ಮೊದಲಿನಿಂದಲೂ ಇವೆ. ಆ ಸಂದರ್ಭದಲ್ಲಿ ಧರ್ಮಸ್ಥಳವನ್ನ ಬೆಂಬಲಿಸಿ ಬಿಜೆಪಿಯ ಯಾವ ನಾಯಕರೂ ಹೇಳಿಕೆ ನೀಡಿದ ಉದಾಹರಣೆಗಳಿಲ್ಲ. ಈಗ ಕೆಲವರು ತರಾತುರಿಯಲ್ಲಿ ಧರ್ಮಸ್ಥಳಕ್ಕೆ ಯಾತ್ರೆ ಹೋಗುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ" ಎಂದರು.