ಲಿಂಗನಮಕ್ಕಿ ಜಲಾಶಯದಿಂದ 36 ಸಾವಿರ ಕ್ಯೂಸಕ್ ನೀರು ಬಿಡುಗಡೆಗೊಳಿಸಿದ ಹಿನ್ನೆಲೆ ಜೋಗ ಜಲಪಾತ ದ ವೈಭವ ಮತ್ತಷ್ಟು ಹೆಚ್ಚಾಗಿದೆ. ಸಾಗರ ತಾಲೂಕಿನ ಜೋಗ ಜಲಪಾತದಲ್ಲಿ ಬುಧವಾರ ಸಂಜೆ 6 ಗಂಟೆಗೆ ಜಲಪಾತದ ವೈಭವ ಕಣ್ತುಂಬಿಕೊಂಡು ಪ್ರವಾಸಿಗರು ಖುಷಿ ಪಟ್ಟರು. ಲಿಂಗನಮಕ್ಕಿ ಜಲಾಶಯದಿಂದ 36 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿತ್ತು. ಹಾಗಾಗಿ ಇಂದು ಜೋಗ ಜಲಪಾತದಲ್ಲಿ ರಾಜಾ, ರಾಣಿ, ರೋರರ್ ಮತ್ತು ರಾಕೆಟ್ ಜಲಪಾತಗಳು ಭೋರ್ಗರೆಯುತ್ತಿದ್ದವು. ಇಂದು ಭಾರಿ ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದರು. ಜಲಪಾತದ ಮುಂದೆ ನಿಂತು ಫೋಟೊ, ಸೆಲ್ಫಿಗೆ ಪೋಸ್ ನೀಡಿ ಖುಷಿ ಪಟ್ಟರು.