ಕಲಬುರಗಿ: ಆಳಂದ ತಾಲ್ಲೂಕಿನ ಕಿಣ್ಣಿಸುಲ್ತಾನ್ ಹೊಸ ಸೇತುವೆ ಬಳಿ ಮಂಗಳವಾರ ರಾತ್ರಿ 9-30 ರ ಸುಮಾರಿಗೆ ಬೈಕ್ ಸವಾರ ಕಬ್ಬಿಣದ ಸಲಾಕೆಗೆ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ತಡಕಲ್ ಗ್ರಾಮದ ಮಹೇಶ್ ರಾಜು ನೈಕೋಡಿ (26) ಎಂದು ಗುರುತಿಸಲಾಗಿದೆ. ಭಾರೀ ಮಳೆಯ ನಡುವೆ ಆಳಂದದಿಂದ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಆಳಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.