ಕಮಲಾಪುರ ತಾಲೂಕಿನ ಓಕಳಿ ಗ್ರಾಮದಲ್ಲಿ ಮಂಗಳವಾರ ಹಾಡುಹಗಲೇ ಮನೆ ಕಳ್ಳತನವಾದ ಘಟನೆ ನಡೆದಿದೆ.. ಗ್ರಾಮದ ಬಸವರಾಜ ಪಾಟಿ ಅವರ ಮನೆಯಲ್ಲಿ ಬೀಗ ಮುರಿದು ನುಗ್ಗಿದ ಕಳ್ಳರು, ಪೆಟ್ಟಿಗೆಯಲ್ಲಿದ್ದ 3.5 ಗ್ರಾಂ ಚಿನ್ನಾಭರಣ ಹಾಗೂ ಆಕಳು ಖರೀದಿಗಾಗಿ ಸಂಗ್ರಹಿಸಿದ್ದ ₹60 ಸಾವಿರ ನಗದು ಕಳವು ಮಾಡಿ ಪರಾರಿಯಾಗಿದ್ದಾರೆ. ಮನೆಯಲ್ಲಿ ಬಸವರಾಜ ದಂಪತಿ ಮಾತ್ರ ಇರುತ್ತಿದ್ದರು. ದೈನಂದಿನಂತೆ ಅವರು ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಹೊಲಕ್ಕೆ ತೆರಳಿ ಸಂಜೆ ವಾಪಸ್ ಬಂದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ಕಮಲಾಪುರ ಠಾಣೆ ಪಿಎಸ್‌ಐ ಚೇತನ್, ಸಿಬ್ಬಂದಿ ಬಂಡು ರಾಠೋಡ್, ಕೈಲಾಶ್, ಅನಿಲ್ ಹಾಗೂ ಡಾಗ್ ಸ್ಕ್ವಾಡ್, SOCO ಟೀಮ್, ಫಿಂಗರ್‌ಪ್ರಿಂಟ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಬೆರಳಚ್ಚು ಸೇರಿದಂತೆ ವೈಜ್ಞಾನಿಕ ಸಾಕ್ಷ್ಯಗಳನ್