ಕಾವೇರಿ ಕ್ರಿಯಾ ಸಮಿತಿಯ ವತಿಯಿಂದ ನಗರದ ಪುರಭವನ ಮುಂಭಾಗ ಇರುವ ದೊಡ್ಡ ಗಡಿಯಾರ ವೃತ್ತದ ಬಳಿ ಇತ್ತೀಚೆಗೆ ನಿಧನರಾ್ ಕನ್ನಡ ಹೋರಾಟಗಾರರ ದಿವಂಗತ ಸ.ರ. ಸುದರ್ಶನ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎಸ್. ಜಯಪ್ರಕಾಶ್, ಸ.ರ. ಸುದರ್ಶನ್ ಅವರು ಕನ್ನಡ ಪರ ಸಾಕಷ್ಟು ರೂಪಿಸಿ, ಕನ್ನಡಕ್ಕಾಗಿ ಸೇವ ಸಲ್ಲಿಸಿದ್ದರೂ ಅವರನ್ನು ಗುರುತಿಸುವ ಕೆಲಸ ಸರ್ಕಾರದಿಂದ ಆಗಲಿಲ್ಲ. ಬದುಕಿದ್ದಾಗ ಅವರಿಗೆ ಸೂಕ್ತ ಗೌರವ ಮಾಡಬೇಕಾಗಿತ್ತು. ಇಂತಹವರ ಪ್ರಯತ್ನ ಮತ್ತು ಪ್ರೇರಣೆಯಿಂದಲೇ ಇಂದು ಕನ್ನಡದ ಅಸ್ಮಿತೆ ಉಳಿಯುವಂತಾಗಿದೆ ಎಂದರು.