ಅರಣ್ಯ ಬಗರ್ ಹುಕುಂ ಸಾಗುವಾಳಿದಾರ ಬಡ ಕುಟುಂಬಗಳಿಗೆ ಸರಕಾರ ಒನ್ ಟೈಮ್ ಸೆಟಲ್‌ಮೆಂಟ್ ಮೂಲಕ ಭೂಮಿ, ವಸತಿ ಹಕ್ಕು ಮಾನ್ಯ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ರಾಜ್ಯ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಪ್ರಮುಖ ಅಮೀನ್ ಮೊಹಿಸಿನ್ ಅವರು ಸಿ ಮತ್ತು ಡಿ ಭೂಮಿಯ ಸಮಸ್ಯೆಗೆ ದೊರೆಯುವ ಪರಿಹಾರ ಬಡವರ ಪರವಾಗಿ ಇರಬೇಕೇ ಹೊರತು ಉಳ್ಳವರ ಪರವಾಗಿ ಇರಬಾರದು. ಬಡವರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು ಎಂದು ಒತ್ತಾಯಿಸಿದರು.ಅಕ್ರಮ ಸಕ್ರಮ ಸಮಿತಿ ಕೇವಲ ನಾಮಕಾವಸ್ಥೆಗಷ್ಟೇ ಇದ್ದು, ಇದೊಂದು ರಾಜಕೀಯ ಸಮಿತಿಯಾಗಿದೆ. ಈ ಸಮಿತಿಯಡಿ ಎಷ್ಟು ಬಡವರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ ಎಂಬ ಲೆಕ್ಕವನ್ನು ಮೊದಲು ನ