ಭಾನುವಾರ ಬೆಳಗಿನ ಜಾವ 5:45 ಕ್ಕೆ ಶಿವಮೊಗ್ಗ ನಗರದ ಮಹಾವೀರ ವೃತ್ತದಲ್ಲಿ ಕಾರು ಮತ್ತು ಖಾಸಗಿ ಬಸ್ ನಡುವೆ ರಸ್ತೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗದಿದ್ದರೂ ಕಾರಿನ ಹಿಂಭಾಗ ಜಖಂಗೊಂಡಿದೆ. ಗಾಜನೂರಿನಿಂದ ಮಗನನ್ನ ಬೆಂಗಳೂರಿಗೆ ಕಳುಹಿಸಲು ರೈಲ್ವೆ ನಿಲ್ದಾಣಕ್ಕೆ ಕುಟುಂಬವೊಂದು ವ್ಯಾಗನಾರ್ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಬೆಂಗಳೂರಿನಿಂದ ಸೊರಬ ಮೂಲಕ ಸಿದ್ದಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಕಾರಿನ ಹಿಂಭಾಗದ ಇಂಡಿಕೇಟರ್, ಹಿಂಭಾಗ ಡೋರಿನ ಗ್ಲಾಜುಗಳು ಪುಡಿಪುಡಿಯಾಗಿವೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿವೆ. ಘಟನೆ ಪೂರ್ವ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.