ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಹಾಸನದ ಹೆಗಚಿ ಬಳಿಯಿಂದ ಇಂದು ಸಾವಿರಾರು ಸಂಖ್ಯೆಯ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಧರ್ಮಸ್ಥಳಕ್ಕೆ ಸತ್ಯ ಯಾತ್ರೆ ಕೈಗೊಂಡರು. ನಿಖಿಲ್ ಕುಮಾರಸ್ವಾಮಿ ಅವರಿಗೆ ಶಾಸಕರಾದ ಸಿಎನ್ ಬಾಲಕೃಷ್ಣ ಎ ಮಂಜು ಸ್ವರೂಪ್ ಪ್ರಕಾಶ್ ಮಾಜಿ ಶಾಸಕ ಕುಮಾರಸ್ವಾಮಿ ಹಾಗೂ ವಿವಿಧ ವಿಧಾನಸಭಾ ಕ್ಷೇತ್ರದ ಶಾಸಕರು ಒಳಗೊಂಡಂತೆ ಮಹಿಳಾ ಘಟಕದ ಪದಾಧಿಕಾರಿಗಳು ಕೂಡ ಸತ್ಯ ಯಾತ್ರೆಯಲ್ಲಿ ಪಾಲ್ಗೊಂಡರು.ಸಾವಿರಾರು ಬಸ್ ಗಳು ಹಾಗೂ ಕಾರುಗಳಲ್ಲಿ ತೆರಳಿದ ಸತ್ಯ ಯಾತ್ರೆ ವೇಳೆ ನಿಖಿಲ್ ಕುಮಾರಸ್ವಾಮಿ ಬಸ್ ಗಳಿಗೆ ಪೂಜೆ ಸಲ್ಲಿಸಿ, ಯಾತ್ರೆಗೆ ಚಾಲನೆ ನೀಡಿದರು, ಇದೇ ವೇಳೆ ಅಪಾರ ಸಂಖ್ಯೆಯ ಅಭಿಮಾನಿಗಳು ನಿಖಿಲ್ ಕುಮಾರಸ್ವಾಮಿಗೆ ಸಾಥ್ ನೀಡಿದ