ಹುಬ್ಬಳ್ಳಿಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದ ರಾಧಾಕೃಷ್ಣ ಗಲ್ಲಿಯ ಗಜಾನನ ಯುವಕ ಮಂಡಳ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಮುಸ್ಲಿಂ ಮುಖಂಡರು ಸನ್ಮಾನ ಮಾಡಿದ್ದಾರೆ.ಮುಸ್ಲಿಂ ಸಮಾಜದ ಮುಖಂಡರಾದ ಎಂಎಸ್ ಹಿಂದಸಗೇರಿ ಅವರು ಗಜಾನನ ಯುವಕ ಮಂಡಳ ಅಧ್ಯಕ್ಷರಾದ ಸಚಿನ ಕಂಗಳೆಕಾರ್, ಉಪಾಧ್ಯಕ್ಷರಾದ ಕಿರಣ್ ಪವಾರ ಸನ್ಮಾನಿಸಿ ಹಿಂದೂ ಮುಸ್ಲಿಂ ಸೌಹಾರ್ದತೆ ಯನ್ನು ಮೆರೆದಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.