ಭಟ್ಕಳ: ನಗರದ ತರಕಾರಿ ವ್ಯಾಪಾರಿಗೆ ಬೆದರಿಸಿ ಹಣದ ಬೇಡಿಕೆ ಇಟ್ಟು ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಭಟ್ಕಳ ಶಹರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ನಗರದ ಅಬ್ದುಝರಾ ಕಾಲೊನಿ ಬೆಂಡೇಕಾನ್ ನಿವಾಸಿ ಮೊಹಮ್ಮದ್ ಫಾರಿಸ್ ಅಬ್ದುಲ್ ಮುತಲೀಬ್ ಕೋಡಿ (20), ಮೂಸಾನಗರದ ಮೊಹ್ಮದ್ ಅರ್ಶದ್ ಮೊಹ್ಮದ್ ಜುಬೇರ್ ಬ್ಯಾರಿ (22) ಹಾಗೂ ಕುಂದಾಪುರದ ಅಮನ್ ಮಸೂದ್ ಖಾನ್ (20) ಬಂಧಿತ ಆರೋಪಿಗಳಾಗಿದ್ದು, ಇವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.