ನಾಲ್ಕು ವರ್ಷಗಳಿಂದ ಅತಿವೃಷ್ಟಿ ಅನಾವೃಷ್ಟಿಯಿಂದ ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಸರ್ಕಾರ ಕೂಡಲೇ ಸ್ಪಂಧನೆ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಪ್ರಶಾಂತ್ ಗೌಡ ಮಾಲಿ ಪಾಟೀಲ್ ಆಗ್ರಹಿಸಿದ್ದಾರೆ. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿ, ಸಂಪೂರ್ಣ ಸಾಲಮನ್ನಾ, ಎಕರೆಗೆ ₹25,000 ಪರಿಹಾರ, ಬೆಳೆ ವಿಮೆ ಬಿಡುಗಡೆ, ಮನೆ-ಜಮೀನು ಹಾನಿಗೆ ಪರಿಹಾರ, ಕಳಪೆ ರಸಗೊಬ್ಬರ-ಆಗ್ರೋಗಳ ವಿರುದ್ಧ ಕ್ರಮ ಹಾಗೂ ಸರಿಯಾದ ಬೆಳೆ ಸಮೀಕ್ಷೆ ನಡೆಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು. ಗುರುವಾರ 4 ಗಂಟೆಗೆ ಪ್ರತಿಭಟನೆ ಮಾಡಲಾಯಿತು....