ಸಂಚಾರ ನಿಯಮ ಉಲ್ಲಂಘನೆಯ ದಂಡ ವಸೂಲಾತಿಯಲ್ಲಿ ಸರ್ಕಾರ ಶೇ. 50 ರಷ್ಟು ರಿಯಾಯಿತಿ ಘೋಷಣೆ ಮಾಡಿದನ್ವಯ ಶಿವಮೊಗ್ಗ ನಗರ ಪೊಲೀಸರು ಸಂಚಾರಿ ಈ ಚಲನ್ ದಂಡ ಪ್ರಮಾಣದಲ್ಲಿ 1.58.51.750 ರೂ.ಗಳನ್ನು ವಸೂಲಿ ಮಾಡಿದ್ದಾರೆ. ಟ್ರಾಫಿಕ್ ನಿಯಮಗಳ ಉಲ್ಲಂಘನೆಯಲ್ಲಿ ಇದುವರೆಗೂ ದಂಡ ಪಾವತಿಸದೆ ಇರುವವರಿಗೆ ಆಗಸ್ಟ್ 23 ರಿಂದ ಸೆ. 12 ವರೆಗೆ ಶೇ. 50 ರಷ್ಟು ರಿಯಾಯಿತಿಯಲ್ಲಿ ದಂಡ ವಸೂಲಾತಿ ಗೆ ಸರ್ಕಾರದ ಆದೇಶ ಹೊರಡಿಸಿತ್ತು. ಅದರಂತೆ ಶಿವಮೊಗ್ಗ ಸಂಚಾರಿ ಪೊಲೀಸರು ಸೆ.11 ವರೆಗೂ ಒಟ್ಟು ದಂಡ ಪ್ರಮಾಣದಲ್ಲಿ ಶೇ. 50 ರಷ್ಟು ವಸೂಲಿ ಮಾಡಿದ್ದು, 34.438 ದಂಡ ಪ್ರಕರಣಗಳಿಂದ ಒಟ್ಟು 1.58.51.750 ರೂ.ಗಳನ್ನು ವಸೂಲಿ ಮಾಡಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಶುಕ್ರವಾರ ಮಾಹಿತಿ ನೀಡಿದ್ದಾರೆ.