ಆಗಸ್ಟ್ 23 ಸಂಜೆ 7 ಗಂಟೆಗೆ ರ್ಯಾಪಿಡೊ ಚಾಲಕನ ಮೇಲೆ ಆಟೋ ಚಾಲಕರು ದರ್ಪ ಮೆರೆದಿರುವುದು ಬೆಳಕಿಗೆ ಬಂದಿದೆ. ನಗರದ ಹಲವೆಡೆ ರ್ಯಾಪಿಡೊ ಬೈಕ್ ಟ್ಯಾಕ್ಸಿ ಮತ್ತೆ ಆಕ್ಟಿವ್ ಆಗಿದ್ದು ಆಟೋ ಚಾಲಕರ ಕಣ್ಣು ಕೆಂಪು ಮಾಡಿದೆ. ರಸ್ತೆಗೆ ಬರಲು ಅನುಮತಿ ಕೊಟ್ಟವರು ಯಾರು ಅಂತ ವಿಡಿಯೋ ಮಾಡಿ ಆಕ್ರೋಶ ಹೊರ ಹಾಕಿದ್ದು, ರ್ಯಾಪಿಡೊ ಬೈಕ್ ಚಾಲಕ ಪರಿ ಪರಿಯಾಗಿ ಬೇಡಿಕೊಂಡರೂ ಬಿಟ್ಟಿಲ್ಲದೆ ಇರುವುದು ಜನರ ಕಣ್ಣು ಕೆಂಪು ಮಾಡಿದೆ.