ಗುರುವಾರ ಮಧ್ಯಾಹ್ನ ೧೨ ಗಂಟೆ ಸುಮಾರಿಗೆ, ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಹಾಗೂ ಹಿರಿಯ ಕಾದಂಬರಿಗಾರರಾದ ಎಸ್.ಎಲ್. ಭೈರಪ್ಪನವರ ಪಾರ್ಥಿಕ ಶರೀರದ ದರ್ಶನ ಪಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮ ನಮನ ಸಲ್ಲಿಸಿದರು.ಮುಖ್ಯಮಂತ್ರಿಗಳು ಮೃತರ ಕುಟುಂಬದ ಸದಸ್ಯರು ಹಾಗೂ ಬಂಧುಮಿತ್ರರಿಗೆ ಸಾಂತ್ವನ ತಿಳಿಸಿ, "ಭೈರಪ್ಪನವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕ ಮಾತ್ರವಲ್ಲದೆ, ಭಾರತದ ಸಾಂಸ್ಕೃತಿಕ ವಲಯವೂ ಅಪಾರ ನಷ್ಟವನ್ನು ಅನುಭವಿಸಿದೆ. ಅವರ ಕೃತಿಗಳು ಮುಂದಿನ ಪೀಳಿಗೆಗಳಿಗೆ ಸದಾ ಪ್ರೇರಣೆಯಾಗುತ್ತವೆ," ಎಂದು ಶೋಕ ವ್ಯಕ್ತಪಡಿಸಿದರು.