ಹಾಸನ :ಅಧಿವೇಶನದಲ್ಲಿ ಗೃಹ ಮಂಡಳಿ ಅಧ್ಯಕ್ಷ ಹಾಗೂ ಅರಸೀಕೆರೆ ಶಾಸಕ ಶಿವಲಿಂಗೇಗೌಡ ನಾನು ಕುರಿಗಾಹಿ ಕುಟುಂಬದಲ್ಲಿ ಹುಟ್ಟಿದ್ದೇನೆ. ನಮಗೂ ಹಕ್ಕುಗಳನ್ನು ನೀಡಿ ಎಂದು ಹೇಳುವ ಮೂಲಕ ನಮ್ಮ ಸಮುದಾಯದ ಹಕ್ಕುಗಳನ್ನು ಕಸಿದುಕೊಳ್ಳಲು ಹೊನ್ನಾರ ನಡೆಸಿದ್ದಾರೆ ಎಂದು ಯಾದವ ಸಮಾಜದ ಮುಖಂಡರು ಹಾಗೂ ಅರಸೀಕೆರೆ ತಾಲೂಕು ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷ ಜವರಪ್ಪ ಹೇಳಿದರು.ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನದ ವೇಳೆ ಕುರಿಗಾಹಿಗಳಿಗೆ ಭದ್ರತೆ ಹಾಗೂ ಇನ್ನಷ್ಟು ಹಕ್ಕುಗಳನ್ನು ಒದಗಿಸುವ ಸಲುವಾಗಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಶಿವನಂಗೆ ಗೌಡರು ಈ ಮಾತನ್ನು ಹೇಳಿರುವುದು ನಮಗೆ ಬೇಸರ ತಂದಿದೆ. ತುಂಬಿದ ಸದನದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು