ಯಲ್ಲಾಪುರ: ಯುವ ಮನಸ್ಸುಗಳು ಕಾವ್ಯ ರಚನೆಗೆ ಒಲವು ತೋರಬೇಕು.ಡಿಜಿಟಲ್ ಮಾಧ್ಯಮದ ಅಬ್ಬರದ ನಡುವೆ ಓದು ಕ್ಷೀಣಿಸುತ್ತಿದೆ ಎಂದು ಸರಕಾರಿ ಪ್ರಥಮದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರವಿ ಶೇಷಗಿರಿಹೇಳಿದರು. ಅವರು ಸೋಮವಾರ ಪಟ್ಟಣದ ಸಾಹಿತ್ಯ ಭವನದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಡೆದ ಕವಿ ಕಾವ್ಯ ಸಮಯ ಕಾರ್ಯಕ್ರಮದಲ್ಲಿ ಮಾತನಾಡಿ ಕವಿ ತನ್ನ ತಲೆಮಾರಿನ ತುಡಿತವನ್ನು ಸಾಮಾಜಿಕ ಕಾಳಜಿ ಬಿಂಬಿಸುವ ಮೂಲಕ ಮುಂದಿನ ತಲೆಮಾರಿಗೆ ವರ್ಗಾಯಿಸುವ ಜವಬ್ದಾರಿಯನ್ನು ಹೊಂದಿದ್ದಾರೆ ಎಂದರು.ಕಸಾಪ ತಾಲೂಕಾ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಅಧ್ಯಕ್ಷತೆ ವಹಿಸಿ ಮಾತನಾಡಿದರು.