ಆಗಸ್ಟ್ 25 ರಾತ್ರಿ ಸುಮಾರು 9 ಗಂಟೆಗೆ ಹೊತ್ತಿಗೆ ಗುರಾಯಿಸಿರುವ ಕಾರಣಕ್ಕೆ ಎರಡು ಯುವಕರ ಮಧ್ಯೆ ಹಲ್ಲೆ ನಡೆದಿದೆ. ಕೊತುನೂರು ಯುವಕರು ಖಾಸಗಿ ಕಾಲೇಜಿನ ಮುಂಭಾಗ ಟೀ ಕುಡಿತಾ ಇರ್ತಾರೆ. ಅಂತಹ ಸಂದರ್ಭದಲ್ಲಿ ನೇಪಾಳಿ ಯುವಕರು ಕಂಟಪೂರ್ತಿ ಕುಡಿದುಕೊಂಡು ಇವರನ್ನ ಗುರಾಯಿಸಿ ಅವಾಚ್ಯ ಪದ ಬಳಕೆ ಮಾಡಿರುವ ಆರೋಪ ಇದೆ. ಈ ಹಿನ್ನಲೆ ಟ್ರಿಗರ್ ಆದಂತಹ ಕೊತುನೂರು ಹುಡುಗರು ಅಲ್ಲೇ ಗಣೇಶ ಹಬ್ಬಕ್ಕೆ ಕಟ್ಟಿರುವಂತಹ ಬಾವುಟವನ್ನು ಬಿಚ್ಚಿ ಹಿಗ್ಗ ಮುಗ್ಗ ಥಳಿಸಿದ್ದಾರೆ. ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ಬಂದು ಯುವಕರನ್ನ ವಶಕ್ಕೆ ಪಡೆದುಕೊಂಡು ಎನ್ಸಿಆರ್ ದಾಖಲಿಸಿಕೊಂಡು ವಾರ್ನ್ ಮಾಡಿ ಕಳಿಸಿದ್ದಾರೆ. ಯಾರೂ ಕಂಪ್ಲೇಂಟ್ ಕೊಡದ ಹಿನ್ನೆಲೆಯಲ್ಲಿ ಎನ್ ಸಿ ಆರ್ ದಾಖಲಾಗಿದೆ.