ಹಾಸನ: ಸಕಲೇಶಪುರ, ಬೇಲೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಪಿಎಂಎವೈ ಯೋಜನೆಯಡಿ ಅಕ್ರಮ ಎಸಗಿರುವ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಿ, ತನಿಖೆ ನಡೆಸಿ ಶಿಕ್ಷೆಗೆ ಗುರಿಪಡಿಸಬೇಕು. ಇಲ್ಲದಿದ್ದರೆ ಜಿಪಂ ಸಿಇಒ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಶಾಸಕರಾದ ಸಿಮೆಂಟ್ ಮಂಜು ಹಾಗೂ ಹುಲ್ಲಹಳ್ಳಿ ಸುರೇಶ್ ಎಚ್ಚರಿಕೆ ನೀಡಿದರು.ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಂಜು, ೨೦ ದಿನಗಳ ಹಿಂದೆ ಅಕ್ರಮ ಬಯಲಾಗಿದೆ. ಫಲಾನುಭವಿ ಒಬ್ಬರಾದರೆ, ಹಣವನ್ನು ಬೇರೆಯವರ ಖಾತೆಗೆ ಡೆಪಾಸಿಟ್ ಮಾಡಿ ಪಡೆಯಲಿದೆ ಎಂದು ದೂರಿದರು. ಸುಮಾರು ೩ ಕೋಟಿ ದುರುಪಯೋಗ ಆಗಿದೆ. ಇದಕ್ಕೆ ಮೂಲ ಕಾರಣ ರಾಜೇಶ್ ಎಂಬಾತ. ಫಲಾನುಭವಿಗಳ ಪಟ್ಟಿಯನ್ನು ಪಿಡಿಒ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡುತ್ತಾರೆ ಎಂದರು.