ಧರ್ಮಸ್ಥಳದ ಬಗ್ಗೆ ತನಿಖೆ ಆಗುವಾಗ ನಮ್ಮ ಅಭಿಪ್ರಾಯ ಹೇಳೋದು ತಪ್ಪಾಗುತ್ತದೆ. ತನಿಖೆ ಮುಗಿಯಲಿ, ಆಮೇಲೆ ಮಾತಾಡ್ತೀವಿ ಎಂದು ಮಾಜಿ ಡಿಸಿಎಂ ಡಾ. ಸಿ ಎನ್ ಅಶ್ವತ್ಥ್ ನಾರಾಯಣ್ ಬೆಂಗಳೂರಿನ ಸದಾಶಿವನಗರದಲ್ಲಿ ಭಾನುವಾರ ಮಧ್ಯಾಹ್ನ ೩ ಗಂಟೆ ಸುಮಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಪಪ್ರಚಾರ ಮಾಡುತ್ತಿರುವವರಿಗೆ ಹೊರ ದೇಶದಿಂದ ಹಣ ಹರಿದು ಬಂದಿತ್ತಾ ಎಂಬುದು ತನಿಖೆ ಆಗಬೇಕು. ನಾವು ಎನ್‌ಐಎ ತನಿಖೆಗೆ ಮನವಿ ಮಾಡಿದ್ದೇವೆ. ತ್ವರಿತವಾಗಿ ತನಿಖೆ ಮುಗಿಸಿ, ಪ್ರಕರಣ ಆದಷ್ಟು ಬೇಗ ಹೊರ ಬರ್ಲಿ. ಇದರಲ್ಲಿ ನಮಗೆ ಯಾವುದೇ ರಾಜಕೀಯ ದುರುದ್ದೇಶ ಇಲ್ಲ. ಧರ್ಮಸ್ಥಳ ಪ್ರಕರಣ ನೋಡಿದ್ರೆ, ದೇವಸ್ಥಾನ ಟಾರ್ಗೆಟ್ ಮಾಡಿದ್ದು ನಿಜ ಅನಿಸುತ್ತದೆ. ತಿರುಪತಿ, ಅಯ್ಯಪ್ಪ ಸೇರಿದಂತೆ ಸಾಕಷ್ಟು ದೇವಾಲಯ ಟಾರ್ಗೆಟ್ ಮಾಡಿದ್ದಾರೆ ಎಂದಿದ್ದಾರೆ.