Download Now Banner

This browser does not support the video element.

ಶಿವಮೊಗ್ಗ: 5 ದಿನದಲ್ಲಿ 23.50 ಲಕ್ಷ ದಂಡ ಸಂಗ್ರಹ, ಶಿವಮೊಗ್ಗದಲ್ಲಿ ಎಸ್ಪಿ ಮಿಥುನ್ ಕುಮಾರ್ ಮಾಹಿತಿ

Shivamogga, Shimoga | Aug 29, 2025
ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಪಾವತಿಸದೆ ಉಳಿದುಕೊಂಡಿರುವ ಇ-ಚಲನ್‌ಗಳಿಗೆ ರಾಜ್ಯ ಸರ್ಕಾರ ಘೋಷಿಸಿರುವ ಶೇಕಡಾ 50 ರಷ್ಟು ರಿಯಾಯಿತಿ ಯೋಜನೆಗೆ ಶಿವಮೊಗ್ಗದಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ 5 ದಿನಗಳಲ್ಲೇ 23.50 ಲಕ್ಷ ರೂಪಾಯಿ ದಂಡ ಸಂಗ್ರಹವಾಗಿದೆ. ಕರ್ನಾಟಕ ಸರ್ಕಾರದ ಆದೇಶದಂತೆ, ಪೊಲೀಸ್ ಇಲಾಖೆಯು ಆಗಸ್ಟ್ 23, 2025 ರಿಂದ ಸಂಚಾರ ಇ-ಚಲನ್‌ಗಳ ದಂಡ ಪಾವತಿಗೆ ರಿಯಾಯಿತಿ ನೀಡುತ್ತಿದೆ. ಈ ಅಭಿಯಾನ ಆರಂಭವಾದ ಆಗಸ್ಟ್ 23, 2025 ರಿಂದ ಇಲ್ಲಿಯವರೆಗೆ ಶಿವಮೊಗ್ಗ ಜಿಲ್ಲಾ ಸಂಚಾರ ಪೊಲೀಸರು ಒಟ್ಟು 5,709 ಇ-ಚಲನ್‌ಗಳನ್ನು ಇತ್ಯರ್ಥಪಡಿಸಿದ್ದಾರೆ.
Read More News
T & CPrivacy PolicyContact Us