ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಮೇಲ್ನೋಟಕ್ಕೆ ರಾಜ್ಯ ಗುಪ್ತಚರ ಇಲಾಖೆಯ ವೈಫಲ್ಯ ಕಂಡು ಬರುತ್ತಿದೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.ಸೆಪ್ಟೆಂಬರ್ 10ರಂದು ಮದ್ದೂರು ಭೇಟಿಗೆ ತೆರಳುವ ಮುನ್ನ ಬೆಳಿಗ್ಗೆ 10 ಗಂಟೆಗೆ ಮಾಧವನಗರದ ತಮ್ಮ ನಿವಾಸದ ಬಳಿ ಅವರು ಮಾತನಾಡಿದರು.ಮೆರವಣಿಗೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಹಿಳೆಯರು ಭಾಗವಹಿಸುತ್ತಿದ್ದಾಗಲೂ ಒಬ್ಬ ಮಹಿಳಾ ಕಾನ್ಸ್ಟೇಬಲ್ ಸಹ ಇರದಿರುವುದು, ಸ್ಥಳದಲ್ಲಿ ಎಸ್.ಪಿ ಇರದಿರುವುದು, ಮಸೀದಿಯಲ್ಲಿ ನೂರಾರು ಜನ ಕಲ್ಲುಗಳನ್ನಿಟ್ಟುಕೊಂಡಿರುವುದು ನೋಡಿದಾಗ ಇದು ಇಂಟಲಿಜೆನ್ಸ್ ವೈಫಲ್ಯವಲ್ಲವೇ' ಎಂದರು