ಶ್ರೀನಿವಾಸಪುರ ಪಟ್ಟಣದ ಸೋಮಯಾಜಲಹಳ್ಳಿ ಮತ್ತು ಕೂಳಗುರ್ಕಿ ಗ್ರಾಮದಲ್ಲಿ ಗುರುವಾರ ಸಂಜೆ 6: 30ರ ಸಮಯದಲ್ಲಿ ಅದ್ದೂರಿಯಾಗಿ ಕಾವಡಿ ಉತ್ಸವವನ್ನು ಅಪಾರ ಭಕ್ತರ ಸಮ್ಮುಖದಲ್ಲಿ ನಡೆಸಲಾಯಿತು. ಸುಬ್ರಮಣಿಸ್ವಾಮಿ ದೇವಾಲಯದಲ್ಲಿ ಕಾವಡಿ ಮಹೋತವದ ಅಂಗವಾಗಿ ವಿಶೇಷ ಪೂಜಾಕೈಂಕರ್ಯಗಳು ವಿಜೃಂಭಣೆಯಿಂದ ನಡೆಯಿತು. ಕಾವಡಿ ಉತ್ಸವ ಅಂಗವಾಗಿ ಉಂಜಲ್ ಸೇವೆ ಶ್ರದ್ದಾ ಭಕ್ತಿ ಯಿಂದ ಅಪಾರ ಜನಸ್ತೋಮದ ನಡುವೆ ವಿಜೃಂಭಣೆಯಿಂದ ನೆರವೇರಿತು