ಕಾಡಾನೆಗಳ ಉಪಟಳ ಮಿತಿಮೀರಿ ಹೋಗಿದ್ದು ಹಾಡ ಹಗಲೇ ಆನೆಗಳು ಕೃಷಿ ಜಮೀನುಗಳಿಗೆ ಹಿಂಡುಹಿಂಡಾಗಿ ದಾಳಿ ಇಡುತ್ತಿವೆ ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಸಮೀಪದ ಬೆಳಗೋಡು ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ಸೋಮವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ಕಾಣಿಸಿಕೊಂಡು ಅತಂಕ ಸೃಷ್ಟಿಸಿದೆ. ಆನೆಗಳು ಈ ರೀತಿ ದಾಳಿಯಿಡುತ್ತಿರುವುದರಿಂದ ಕಾಫಿ, ಅಡಕೆ, ಬಾಳೆ ಬೆಳೆಗಳನ್ನು ನಾಶ ಮಾಡುತ್ತಿವೆ. ಇತ್ತೀಚಿಗೆ ಗದ್ದೆ ನಾಟಿ ಮಾಡಿರುವ ಗದ್ದೆಗಳನ್ನು ತುಳಿದು ನಾಶ ಮಾಡುತ್ತಿವೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆನೆ ನಿಗ್ರಹ ಪಡೆಯ ಸದಸ್ಯರು ಪಟಾಕಿ ಹೊಡೆಯುದನ್ನು ಬಿಟ್ಟು ಬೇರೆ ಏನು ಮಾಡುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯ