ಭೀಮಾ ನದಿ ಪ್ರವಾಹದ ಹಿನ್ನಲೆ ಗಾಣಗಾಪುರ ದತ್ತಾತ್ರೇಯ ಭಕ್ತರು ಮತ್ತು ಘತ್ತರಗಿ ಭಾಗಮ್ಮ ತಾಯಿ ಭಕ್ತರಿ ಎರಡ್ಮೂರ ದಿನಗಳ ಕಾಲ ತಮ್ಮ ಪ್ರವಾಸ ಮುಂದುಡಿದರೆ ಸೂಕ್ತ ಎಂದು ಡಿಸಿ ಬಿ. ಫೌಜೀಯಾ ತರನ್ನುಮ್ ತಿಳಿಸಿದ್ದಾರೆ. ಶುಕ್ರವಾರ 4 ಗಂಟೆಗೆ ಮಾತನಾಡಿದ ಅವರು, ಉಜನಿ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಿರುವ ಪ್ರಯುಕ್ತ ಹಲವಡೆ ಪ್ರವಾಹ ಸಂಭವಿಸಿದೆ. ಅಲ್ಲದೆ ರಸ್ತೆ ಸಂಪರ್ಕ ಕಡಿತಗೊಂಡಿವೆ. ಭಕ್ತರು ಆಗಮಿಸಿ ಅನಾನುಕುಲಕ್ಕೆ ಒಳಗಾಗದೆ ಇಲ್ಲಿಗೆ ಬರುವದು ಮುಂದುಡಬೇಕೆಂದು ಹೇಳಿದರು.