ಹಾಸನ: ಒಳ ಮೀಸಲಾತಿ ವರ್ಗೀಕರಣದಲ್ಲಿ ಸರ್ಕಾರ ತಾರ್ಕಿಕ ಅಂತ್ಯವಾಡಿ ಜಾರಿ ಮಾಡಿದ ಹಿನ್ನಲೆಯಲ್ಲಿವ ಮಾದಿಗ ದಂಡೋರ ಸಂಘಟನೆಯಿಂದ ನಗರದ ಜಿಲ್ಲಾಧಿಕಾರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಭೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸುವುದರ ಮೂಲಕ ಸಂಭ್ರಮಿಸಿದರು. ಇದೆ ವೇಳೆ ಮಾದಿಗ ದಂಡೋರ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ವಿಜಯ್ ಕುಮಾರ್ ಮಾತನಾಡಿ, ಒಳ ಮೀಸಲಾತಿ ಜಾರಿ ಮಾಡಿದ ಹಿನ್ನಲೆಯಲ್ಲಿ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿಗೆ ಮಲಾರ್ಪಣೆ ಮಾಡಿ ಈಗಾಗಲೇ ಒಂದು ಸಭೆಯನ್ನು ಮಾಡಲಾಗಿದೆ. ಆಗಸ್ಟ್ ೨೫ರ ಸೋಮವಾರದಂದು ಮಾದಿಗ ದಂಡೋರ ಸಂಘಟನೆ ಒಕ್ಕೂಟದಿಂದ ರ‍್ಯಾಲಿ ನಡೆಯಲಿದೆ ಎಂದರು.