ಇಳಕಲ್ ವಿಜಯ ಮಹಾಂತೇಶ ಸಂಸ್ಥಾನ ಮಠ ಮತ್ತು ಶಿರೂರ ವಿಜಯ ಮಹಾಂತೇಶ್ವರ ತೀರ್ಥ ವತಿಯಿಂದ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಅಖಿಲ ಭಾರತ ಯೋಗ ಮತ್ತು ನಿಸರ್ಗ ಚಿಕಿತ್ಸಾ ಸಮ್ಮೇಳನದ ಪೂರ್ವಭಾವಿ ಸಭೆಗೆ ಅಬಕಾರಿ ಸಚಿವ ಆರ್ ಬಿ ತಿಮ್ಮಾಪೂರ ಹಾಜರಾಗಿ ಅದರ ರೂಪರೇಷೆಗಳ ಬಗ್ಗೆ ಗುರುಮಹಾಂತಶ್ರೀಗಳು ಮತ್ತು ಡಾ ಬಸವಲಿಂಗ ಸ್ವಾಮಿಗಳ ಜೊತೆಗೆ ಸೆ. 07 ಮಧ್ಯಾಹ್ನ 1 ಗಂಟೆಗೆ ಚರ್ಚಿಸಿದರು. ಇಲ್ಲಿನ ಶ್ರೀಮಠದಲ್ಲಿ ಸೇರಿದ್ದ ಹಲವಾರು ಭಕ್ತರ ಜೊತೆಗೆ ಸಮ್ಮೇಳನದ ರೂಪರೇಷೆಗಳ ಬಗ್ಗೆ ಮಾತನಾಡಿದ ಅವರು ಸುಕ್ಷೇತ್ರ ಕೂಡಲಸಂಗಮದಲ್ಲಿ ನಡೆಯಲಿರುವ ಈ ಸಮ್ಮೇಳನ ಸಂಪೂರ್ಣವಾಗಿ ಯಶಸ್ವಿಯಾಗುವಂತೆ ಎಲ್ಲರೂ ಸೇರಿ ಪ್ರಯತ್ನಿಸೋಣ ಎಂದು ಹೇಳಿದರು. ಸಚಿವರನ್ನು ಶ್ರೀಮಠದ ವತಿಯಿಂದ ಗುರುಮಹಾಂತಶ್ರೀಗಳು ಸತ್ಕರಿಸಿ ಗೌರವಿಸಿದರು.ಶ್ರ