ಉತ್ತರಹಳ್ಳಿ ಸಮೀಪ ವಿಷ್ಣುವರ್ಧನ್ ಸಮಾಧಿ ಕೆಡವಿದವರಿಗೆ ಬಿಗ್ ಶಾಕ್ ಸರ್ಕಾರ ಕೊಟ್ಟಿದೆ. ಅಭಿಮಾನ್ ಸ್ಟುಡಿಯೋ ಕೊಟ್ಟಿದ್ದ ಜಾಗವನ್ನು ಅರಣ್ಯ ಭೂಮಿ ಅಂತ ಘೋಷಣೆ ಮಾಡಿದೆ. ಅರಣ್ಯಾಧಿಕಾರಿ ರವೀಂದ್ರ ನಿಯಮ ಉಲ್ಲಂಘನೆಯಾಗಿದೆ ಅಂತ ಡಿಸಿಗೆ ಪತ್ರ ಬರೆದಿದ್ದಾರೆ. ಸ್ಟುಡಿಯೋ ನಿರ್ಮಾಣ ಉದ್ದೇಶದಿಂದ 20 ಎಕರೆ ಭೂಮಿ20 ವರ್ಷ ಲೀಸ್ ಗೆ ನೀಡಲಾಗಿತ್ತು. ನಂತರ ಲೀಸ್ ಅವಧಿ ವಿಸ್ತರಣೆ ಆಗಿದೆ. ಷರತ್ತು ಉಲ್ಲಂಘನೆ ಆಗಿರೋ ಬಗ್ಗೆ ಅರಣ್ಯ ಇಲಾಖೆ ಪತ್ರದಲ್ಲಿ ಉಲ್ಲಂಘನೆ ಆಗಿದೆ. ಮಂಜೂರಾತಿ ಆದೇಶ ರದ್ದು ಪಡಿಸಲು ಮನವಿ ಮಾಡಲಾಗಿದೆ. ಈ ಪತ್ರ ಆಗಸ್ಟ್ 29 ಹೊರ ಬಿದ್ದಿದೆ.