ಕೊರಟಗೆರೆ ಜೂನಿಯರ್ ಕಾಲೇಜಿನಲ್ಲಿ ನಡೆದ ದಸರಾ ಕ್ರೀಡಾಕೂಟ ಹಣ ದುರ್ಬಳಕೆ ಮತ್ತು ನಿರ್ಲಕ್ಷ್ಯ ಆರೋಪದ ನಡುವೆ ಕ್ರೀಡಾಪಟುಗಳು ಸೋಮವಾರ ಮಧ್ಯಾಹ್ನ 3 ಗಂಟೆಯಲ್ಲಿ ಪ್ರತಿಭಟನೆ ನಡೆಸಿದರು. ಮುಂಜಾಗ್ರತಾ ಕ್ರಮಗಳಿಲ್ಲದೆ ಆಯೋಜನೆ, ಶಾಲಾ ಮಕ್ಕಳನ್ನು ಮಾರ್ಕಿಂಗ್ ಹಾಗೂ ಸ್ವಚ್ಛತೆಗಾಗಿ ಬಳಸಿಕೊಂಡಿದ್ದಕ್ಕೆ ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಕ್ರೀಡಾಪಟು–ಆಯೋಜಕರ ನಡುವೆ ವಾದ–ಪ್ರತಿವಾದ ನಡೆಯಿತು. ಸ್ಥಳಕ್ಕೆ ಬಂದ ಪಿಎಸ್‌ಐ ತೀರ್ಥೇಶ್ ಹಾಗೂ ಗೃಹ ಸಚಿವರ ಆಪ್ತ ಕಾರ್ಯದರ್ಶಿ ನಾಗಣ್ಣ ಮಧ್ಯಪ್ರವೇಶಿಸಿ ಕ್ರೀಡಾಪಟುಗಳನ್ನು ಸಮಾಧಾನ ಪಡಿಸಿದರು. ಗೃಹ ಸಚಿವರ ಕ್ಷೇತ್ರವಿದು, ಜವಾಬ್ದಾರಿಯಿಂದ ಕೆಲಸ ಮಾಡಿ ಎಂದು ಆಯೋಜಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ಭಾನುವಾರ ಎಲ್ಲಾ ಸಿದ್ಧತೆಗಳೊಂದಿಗೆ ಕ್ರೀಡಾಕೂಟ ನಡೆಸುವ