ಬೀದರ್ : ನಗರದ ಗಾಂಧಿ ಗಂಜ್ ಹಾಗೂ ನೂತನ ನಗರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಪೊಲೀಸ್ ರು ದಾಳಿ ನಡೆಸಿ 2. 19ಕೋಟಿ ರೂ ಮೌಲ್ಯದ ಪಾನ್ ಮಸಾಲಾ, ಗುಟ್ಕಾ ಸಾಮಾಗ್ರಿಗಳು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ. ನಗರದಲ್ಲಿ ಭಾನುವಾರ ಮಧ್ಯಾಹ್ನ 1 ಗಂಟೆಗೆ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾನಾಡಿದರು.