ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಕಾರೊಂದಕ್ಕೆ 88,500 ರೂ. ದಂಡ ವಿಧಿಸಲಾಗಿದೆ. ರಿಯಾಯಿತಿ ದರದ ಅವಕಾಶ ಪಡೆದ ಕಾರು ಚಾಲಕ ಈಗ ಅರ್ಧ ಮೊತ್ತದ ದಂಡ ಪಾವತಿಸಿದ್ದಾರೆ. ಶಿವಮೊಗ್ಗ ನೋಂದಣಿಯ ಕಾರೊಂದರ ವಿರುದ್ಧ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ 44 ಪ್ರಕರಣಗಳಿದ್ದವು. ಸಿಗ್ನಲ್ ಜಂಪ್, ಅತಿ ವೇಗದ ಚಾಲನೆ, ಕಾರು ಚಾಲನೆ ವೇಳೆ ಮೊಬೈಲ್ ಬಳಕೆ ಸೇರಿದಂತೆ ನಾನಾ ಪ್ರಕರಣಗಳು ಇದ್ದವು. ಈ ಉಲ್ಲಂಘನೆಗೆ ಬರೋಬ್ಬರಿ 88,500 ದಂಡ ಪಾವತಿಸಬೇಕಿತ್ತು. ಸರ್ಕಾರ ಘೋಷಿಸಿರುವ ರಿಯಾಯಿತಿ ದರದ ಅವಕಾಶ ಪಡೆದ ಕಾರು ಮಾಲೀಕ 44,250 ದಂಡ ಸೋಮವಾರ ಸಂಜೆ 6 ಗಂಟೆಗೆ ಶಿವಮೊಗ್ಗ ಪಶ್ಚಿಮ ಸಂಚಾರ ಠಾಣೆಗೆ ಪಾವತಿಸಿದ್ದಾರೆ.