ಸಕಲೇಶಪುರ ತಾಲ್ಲೂಕಿನಲ್ಲಿ ವಿಕ್ರಾಂತ್ ಆನೆಯನ್ನು ಇತ್ತೀಚೆಗೆ ಸೆರೆ ಹಿಡಿದು ಶಿವಮೊಗ್ಗದ ಸಕ್ರೇಬೈಲು ಆನೆ ಶಿಬಿರಕ್ಕೆ ಬಿಡಲಾಗಿತ್ತು. ಸಕ್ರೇಬೈಲು ಶಿಬಿರದಲ್ಲಿ ಬಂಧಿಸಿ ವಿಚಿತ್ರವಾಗಿ ಹಿಂಸೆ ಕೊಟ್ಟು ಪಳಗಿಸಲಾಗ್ತಿದ್ದು ಈ ಸಂಬಂಧ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ವೀಡಿಯೋವೊಂದು ಪಬ್ಲಿಕ್ ಆ್ಯಪ್ ಗೆ ಲಭ್ಯವಾಗಿದೆ. ಹೊಡೆದು ಬಡೆದು ಆನೆಗೆ ಪಳಗಿಸಲಾಗ್ತಿದೆ. ವಿಕ್ರಾಂತ ಕ್ರಾಲಿನಲ್ಲಿ ಗಾಯವಾಗಿದ್ದು ರಕ್ತ ಕಿವು ಬರುತ್ತಿದ್ದು, ನರಕಯಾತನೆ ಅನುಭವಿಸುತ್ತಿದ್ದಾನೆ. ಸಕ್ಕರೆಬೈಲು ಆನೆ ಶಿಬಿರದಲ್ಲಿ ವಿಕ್ರಾಂತ ಆನೆಗೆ ವಿಚಿತ್ರವಾಗಿ ದೈಹಿಕ ಹಿಂಸೆ ನೀಡಲಾಗ್ತಿದೆ ಎಂಬ ಆರೋಪ ಕೇಳಿಬಂದಿದೆ. ಕಾಡಿನಲ್ಲಿ ದಷ್ಟಪುಷ್ಟವಾಗಿ ಸಮೃದ್ಧಿಯಾಗಿ ಇದ್ದ ವಿಕ್ರಾಂತ ಸಾಯುವ ಅಂತಕ್ಕೆ ತಲುಪಿರುವ ಆರೋಪ ಕೇಳಿ ಬಂದಿದೆ.