ಪಾವಗಡ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಂಗಳಮುಖಿಯರ ಅಟ್ಟಹಾಸ ನಡೆದಿದೆ. ನಾಗಲಾಪುರ ಗೇಟಿನ ನಿವಾಸಿ ಸೀನಪ್ಪ ಅವರ ಮಗ ಸುರೇಶ್ ಏಳು ವರ್ಷಗಳ ಹಿಂದೆ ಲಿಂಗ ಬದಲಾವಣೆ ಮಾಡಿಕೊಂಡು "ರೇಣುಕಾ" ಎಂಬ ಹೆಸರಿನಿಂದ ಮಂಗಳಮುಖಿಯರ ಜೊತೆ ವಾಸಿಸುತ್ತಿದ್ದ. ಕುಟುಂಬದೊಂದಿಗೆ ಜೀವನ ನಡೆಸಲು ನಿರ್ಧರಿಸಿದ್ದ ರೇಣುಕಾಳನ್ನು ಮನೆಗೆ ಕರೆದುಕೊಂಡು ಹೋಗಲು ಬಂದ ತಂದೆ ಮತ್ತು ತಮ್ಮನ ಮೇಲೆ ಮಂಗಳಮುಖಿಯರ ಗುಂಪು ಚಪ್ಪಲಿಗಳಿಂದ ಹಾಗೂ ಕೈಯಾರೆ ಹಲ್ಲೆ ನಡೆಸಿದ್ದಾರೆ ಎನ್ನುವುದು ಒಂದೆಡೆಯಾದರೆ ಮತ್ತೊಂದೆಡೆ ರೇಣುಕಾಳ ಸರ್ಜರಿಗೆ ಮತ್ತು ಸಾಲ ಕೊಡಿಸಿರುವ ಹಣವನ್ನ ವಾಪಸ್ ನೀಡುವಂತೆ ಕೇಳಿದಂತಹ ಸಂದರ್ಭ ದಲ್ಲಿ ಎರಡು ಗುಂಪಗಳ ನಡ