ಹಾಸನ: ಹೊಸ ಟೆಂಡರ್ ನಿಂದಾ ನಮಗೆ ಅನ್ಯಾಯ ಆಗುತ್ತಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿ ನಗರದ HPCL ಬಳಿ ಲಾರಿ ಚಾಲಕರು ಇಂದು ಮುಷ್ಕರ ಹಮ್ಮಿಕೊಂಡಿದ್ದರು ಬಳಿಕ ಶಾಸಕ ಸ್ವರೂಪ ಅವರ ಮನವೊಲಿಸಿ ನಮಸ್ಕಾರ ವಾಪಸ್ ಪಡೆಸುವಲ್ಲಿ ಯಶಸ್ವಿಯಾದರು.ಹೊಸ ಟೆಂಡರ್ ಪ್ರಕ್ರಿಯೆಯಿಂದ ಪ್ರಸ್ತುತ ಚಾಲ್ತಿಯಲ್ಲಿರುವ ಲಾರಿ ಮಾಲೀಕರಿಗೆ ಹಾಗೂ ಚಾಲಕರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಇದನ್ನು ಸರಿಪಡಿಸಿ ನ್ಯಾಯ ಒದಗಿಸಬೇಕು ಎಂಬುದು ಲಾರಿ ಚಾಲಕರ ಒತ್ತಾಯವಾಗಿತ್ತು. ಲಾರಿ ಚಾಲಕರ ಮನವೊಲಿಸಿ ಬಳಿಕ ಶಾಸಕ ಸ್ವರೂಪ ಪ್ರಕಾಶ್ ಮಾತನಾಡಿ, ಹೆಚ್ ಪಿ ಸಿ ಎಲ್ ಗೆ ಸಂಬಂಧ ಪಟ್ಟಂತೆ ಲಾರಿ ಚಾಲಕರು ಹಾಗೂ ಮಾಲೀಕರು ಟೆಂಡರ್ ಪ್ರಕ್ರಿಯೆಯಲ್ಲಿ ಕೆಲವು ಸಮಸ್ಯೆಗಳಾಗಿದೆ ಎಂದರು.