ತುಂಬಿಹರಿತ್ತಿರುವ ಚರಂಡಿ ನೀರಿನಿಂದ ನಗರದಲ್ಲಿ ದುರ್ವಾಸನೆ ಆಗುತ್ತಿದ್ದು ಹಾಗೂ ಸಾರ್ವಜನಿಕರ ಸಂಚಾರಕ್ಕೂ ಕೂಡ ತೊಂದರೆ ಆಗುತ್ತಿದ್ದು ಸಮಸ್ಯೆ ಕುರಿತು ವಿಡಿಯೋ ಮಾಡುವ ಮೂಲಕ ಸಮಸ್ಯೆ ತೋಡಿಕೊಂಡಿದ್ದಾರೆ. ಹುಬ್ಬಳ್ಳಿಯ ವಾರ್ಡ್ ನಂಬರ್ 42ರ ಆಸಾರ ಓಣಿಯಲ್ಲಿ ಚರಂಡಿ ನೀರು ತುಂಬಿ ಹರಿತ್ತಿದ್ದು. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಸಾಂಕ್ರಾಮಿಕ ರೋಗದ ಭೀತಿಯು ಕೂಡ ವಾಸಿಗಳಿಗೆ ಕಾಡಿದೆ. ಇನ್ನಾದರೂ ಪಾಲಿಕೆ ಎತ್ತುಕೊಂಡು ಸಮಸ್ಯೆ ಬಗ್ಗೆ ಹರಿಸಬೇಕೆಂದು ಇಲ್ಲಿ ಸ್ಥಳೀಯರ ಆಗ್ರಹವಾಗಿದೆ.