ಹಾಡಹಗಲೆ ಮನೆಗೆ ನುಗ್ಗಿ ಕಳ್ಳತನ ಎಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಬಾಣಸವಾಡಿ ಠಾಣೆ ವ್ಯಾಪ್ತಿಯ ಮಾರುತಿ ಸ್ಟ್ರೀಟ್‌ನಲ್ಲಿರುವ ಶೀತಲ್ ಥಾಪಾ ಎಂಬುವವರ ಮನೆಯಲ್ಲಿ ಘಟನೆ ನಡೆದಿದ್ದು ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಪ್ರಕರಣದ ಕುರಿತು ಸೆಪ್ಟೆಂಬರ್ 6ರಂದು ಬೆಳಿಗ್ಗೆ 10 ಗಂಟೆಗೆ ಮಾಹಿತಿ ನೀಡಿದ ಪೊಲೀಸರು,"ಕಲ್ಯಾಣಮಂಟಪದ ವ್ಯವಸ್ಥಾಪಕರಾಗಿದ್ದ ಶೀತಲ್ ಥಾಪಾ ಮತ್ತವರ ಮನೆಯವರು ಇರದಿದ್ದಾಗ ಬಂದಿರುವ ಆರೋಪಿ ಮನೆಯ ಬಾಗಿಲು ಮುರಿದು 1 ಲಕ್ಷ ನಗದು, 2.5 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ.ಘಟನೆ ಕುರಿತು ಶೀತಲ್ ಥಾಪಾ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ' ಎಂದರು.