ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ಸೋಮವಾರ ಮಧ್ಯಾಹ್ನ 2 ಗಂಟೆಯಲ್ಲಿ ಪಟ್ಟಣದಲ್ಲಿ ನೂರಾರು ಭಕ್ತರು ಬೃಹತ್ ಪ್ರತಿಭಟನೆ ನಡೆಸಿದರು. ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ವತಿಯಿಂದ ಗುರುಭವನ ಮೈದಾನದಿಂದ ಪ್ರಾರಂಭವಾದ ಮೆರವಣಿಗೆ ಶನಿಮಹಾತ್ಮ ವೃತ್ತದವರೆಗೆ ಸಾಗಿದ್ದು, ಭಕ್ತರು ಮಾನವ ಸರಪಳಿ ನಿರ್ಮಿಸಿ ಗಿರೀಶ್ ಮಟ್ಟೆನ್ನವರ, ಮಹೇಶ್ ತಿಮ್ಮರೊಡ್ಡಿ, ಜಯಂತ ಟಿ ಮತ್ತು ಸಮೀರ್ ವಿರುದ್ಧ ಧಿಕಾರ ಘೋಷಣೆಗಳನ್ನು ಕೂಗಿದರು. ಮಾಜಿ ಸಚಿವ ವೆಂಕಟರಮಣಪ್ಪ, ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಆರ್.ಸಿ. ಅಂಜನಪ್ಪ, ಬಿಜೆಪಿ ಮುಖಂಡ ಡಾ. ಜಿ. ವೆಂಕಟರಾಮಯ್ಯ, ದೊಡ್ಡಹಳ್ಳಿ ಅಶ