ಯುವತಿಯ ಬೆತ್ತಲೆ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ದಲ್ಲದೆ ಮನೆಗೆ ನುಗ್ಗಿ ಪೀಠೋಪಕರಣ ಧ್ವಂಸಗೊಳಿಸಿ ದಾಂಧಲೆ ಮಾಡಿದ ಯುವಕನ ವಿರುದ್ದ ಎನ್.ಆರ್.ಠಾಣೆ ಪೊಲೀಸರು FIR ದಾಖಲಿಸಿದ್ದಾರೆ. ತಾನು ಪ್ರೀತಿಸಿದ ಯುವಕನ ನಡೆಸಿದ ಅವಾಂತರದ ವಿರುದ್ದ ನೊಂದ ಯುವತಿ ನೀಡಿದ ದೂರಿನ ಮೇರೆಗೆ ತೇಜಸ್ ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ. ನೊಂದ ಯುವತಿ ಹಾಗೂ ತೇಜಸ್ 10 ನೇ ತರಗತಿಯಿಂದ ಒಟ್ಟಿಗೆ ಓದುತ್ತಿದ್ದರು. ಕಾಲೇಜಿಗೆ ಬಂದಾಗ ಲವ್ವಿ ಡವ್ವಿ ನಡೆದಿದೆ. ಬಳಿಕ ಯುವಕನ ಚಾರಿತ್ರ್ಯ ಸರಿಯಿಲ್ಲವೆಂದು ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಯನ್ನು ಕೊಲೆ ಮಾಡುವುದಾಗಿ ಬೆದರಿಕೆಯಾಕಿದ್ದಾನೆ.