ಆರ್ಥಿಕವಾಗಿ ದುರ್ಬಲವಾದ ಬಡವರು, ಹಿಂದುಳಿದವರಿಗೆ ಸೀಮಿತ ದಾಖಲೆಗಳ ಮೇಲೆ ಸರಳವಾಗಿ ಸಾಲ ಸೌಲಭ್ಯ ನೀಡುವ ಸಹಕಾರಿ ಸಂಸ್ಥೆಗಳಿಗೆ ಜನರ ಸಹಕಾರವೂ ಮುಖ್ಯ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು. ಶಿವಮೊಗ್ಗ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಎಲ್‌ಎಲ್‌ಆರ್ ರಸ್ತೆಯ ಶಾಖಾ ಕಚೇರಿಯ ಸ್ವಂತ ನೂತನ ಕಟ್ಟಡ ಉದ್ಘಾಟಿಸಿ ಸೋಮವಾರ ಸಂಜೆ 5 ಗಂಟೆಗೆ ಮಾತನಾಡಿದ ಅವರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಪ್ರಗತಿಗೆ ಅನೇಕ ಹಿರಿಯರ ತಪ್ಪಸ್ಸು ಇದೆ. ಅವತ್ತಿನ ಕಾಲದಲ್ಲಿ ಅವರೆಲ್ಲರೂ ಬೇರೆ ಬೇರೆ ರಾಜಕೀಯ ಪಕ್ಷ ಗಳಲ್ಲಿದ್ದರೂ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಅನ್ನು ಕಟ್ಟುವಲ್ಲಿ ಪಕ್ಷಾತೀತವಾಗಿ ದುಡಿದಿದ್ದಾರೆ ಎಂದರು