ಕಲ್ಬುರ್ಗಿ ನಗರ ಪೊಲೀಸ್ ಆಯುಕ್ತ ಡಾ|| ಶರಣಪ್ಪ ಎಸ್ ಡಿ ಅವರು ನಗರ ಪ್ರದಕ್ಷಿಣೆ ನಡೆಸಿದರು. ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮೆರವಣಿಗೆ ಜರುಗುವ ಮಾರ್ಗಗಳನ್ನು ಪರಿಶೀಲನೆ ಮಾಡಿದರು. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು. ರೋಜಾ ಪೊಲೀಸ್ ಠಾಣೆ, ದಕ್ಷಿಣ ಉಪ ವಿಭಾಗ ಪೊಲೀಸ್ ಕಚೇರಿಗೆ ಕೂಡ ಭೇಟಿ ನೀಡಿ ಪರಿಶೀಲನೆ ಕೈಕೊಂಡರು. ಈ ಕುರಿತು ಮಂಗಳವಾರ 6 ಗಂಟೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ.