ಚನ್ನಪಟ್ಟಣ - ಪಟ್ಟಣದ ನಗರಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು. ಪಟ್ಟಣದ 12 ವಾರ್ಡ್ ನ ನಗರಸಭಾ ಸದಸ್ಯ ಲೋಕೇಶ ಅವಿರೋಧವಾಗಿ ಆಯ್ಕೆಯಾದರು. ನಗರಸಭೆಯಲ್ಲಿ ಹಿಂದೆ ಉಪಾಧ್ಯಕ್ಷರಾಗಿದ್ದ ಶ್ರೀನಿವಾಸ್ ಮೂರ್ತಿ ಅವರ ರಾಜೀನಾಮೆಯಿಂದ ತೆರೆವಾಗಿದ್ದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಲೋಕೇಶ್ ಒಬ್ಬರೇ ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಲೋಕೇಶ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ನಿಯೋಜನೆಗೊಂಡಿದ್ದ ಜಿಲ್ಲಾ ಉಪವಿಭಾಗಾಧಿಕಾರಿ ಬಿನೋಯ್ ಪ್ರಕಟಿಸಿದರು. ಇನ್ನೂ ನೂತನವಾಗಿ ಆಯ್ಕೆಯಾದ ಉಪಾಧ್ಯಕ್ಷ ಲೋಕೇಶ್ ಅವರನ್ನು ನಗರಸಭಾ ಅಧ್ಯಕ್ಷ ವಾಸೀಲ್ ಅಲಿಖಾನ್