Download Now Banner

This browser does not support the video element.

ಬಳ್ಳಾರಿ: ನಗರದಲ್ಲಿ ಗಣಪತಿಯ ಶೋಭಾಯಾತ್ರೆ; ಡಿಜೆಗಾಗಿ ಪಟ್ಟು, ಪ್ರತಿಭಟನೆ

Ballari, Ballari | Sep 3, 2025
ನಗರದ ರಾಜ್‌ಕುಮಾರ್‌ರಸ್ತೆಯಲ್ಲಿ ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿಯ ಶೋಭಾ ಯಾತ್ರೆ ವೇಳೆ ಡಿಜೆಗೆ ಅನುಮತಿ ನೀಡುವಂತೆ ಒತ್ತಾಯಿಸಿಮಂಗಳವಾರ ಸಂಜೆ 6:50ಕ್ಕೆ ರಸ್ತೆಯಲ್ಲಿಯೇ ದಿಢೀರ್ ಪ್ರತಿಭಟನೆ ನಡೆದು, ಪೊಲೀಸರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಹಿಂದೂ ಮಹಾಗಣಪತಿಯ ಶೋಭಾ ಯಾತ್ರೆಗೆ ಡಿಜೆ ಅಳವಡಿಕೆಗಾಗಿ ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆಯ ಲಾಗಿತ್ತು. ಆದರೆ, ಯಾತ್ರೆ ವೇಳೆ 2 ಸ್ಪೀಕರ್ ಅಳವಡಿಕೆಗಾಗಿ ಮಾತ್ರ ಅನುಮತಿ ನೀಡಿ ದ್ದು, ಇದಕ್ಕಿಂತ ಹೆಚ್ಚು ಸ್ಪೀಕರ್‌ಅಳವಡಿಕೆಗೆ ಅನುಮತಿಯಿಲ್ಲವೆಂದು ಪೊಲೀಸರು ಹೇಳು ತ್ತಿದ್ದಂತೆಯೇ ಆಕ್ರೋಶಗೊಂಡ ಸಂಘಟ ಕರು, ಪೊಲೀಸರ ಜತೆ ವಾಗ್ವಾದಕ್ಕಿಳಿದರಲ್ಲದೆ ಡಿಜೆಗೆ ಅನುಮತಿ ನೀಡುವಂತೆ ಆಗ್ರಹಿಸಿ ರಸ್ತೆಯಲ್ಲಿಯೇ ಪ್ರತಿಭಟನೆಗಿಳಿದರು.
Read More News
T & CPrivacy PolicyContact Us