ಜೆಡಿಎಸ್ ಸತ್ಯ ಯಾತ್ರೆ ವೇಳೆ ಕಳ್ಳತನಕ್ಕೆ ಯತ್ನಿಸಿದ ಇಬ್ಬರಿಗೆ ಸಾರ್ವಜನಿಕರು ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ಯಗಚಿ ಪ್ರೌಡ ಶಾಲೆ ಬಳಿ ನಡೆದಿದೆ.ಎಗಚಿ ಪ್ರೌಢಶಾಲೆ ಆವರಣದಲ್ಲಿ ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಸತ್ಯ ಯಾತ್ರೆ ಅಂಗವಾಗಿ ಸಾವಿರಾರು ಮಂದಿ ಜೆಡಿಎಸ್ ಕಾರ್ಯಕರ್ತರು ಮುಖಂಡರು ಜಮಾಯಿಸಿದ್ದರು. ಇದನ್ನೇ ಲಾಭವಾಗಿಸಿಕೊಂಡ ಚೋರರು ಹಲವರ ಜೇಬಿಗೆ ಕತ್ತರಿ ಹಾಕಿ ನಗದು ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಕೆಲ ಹೊತ್ತಿನ ನಂತರ ಅನುಮಾನ ಬಂದು ಅವರನ್ನು ಹಿಡಿದು ಧರ್ಮದೇಟು ಕೊಟ್ಟಿದ್ದಾರೆ. ಈ ವೇಳೆ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದು ಬಳಿಕ ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದರು..