Download Now Banner

This browser does not support the video element.

ಇಳಕಲ್‌: ತಾಲೂಕಿನಾದ್ಯಂತ ಸುರಿದ ಮಳೆಗೆ 35 ಕ್ಕೂ ಹೆಚ್ಚು ಮನೆಗಳ ಕುಸಿತ

Ilkal, Bagalkot | Sep 27, 2025
ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ೨ ದಿನಗಳಲ್ಲಿ ಒಟ್ಟು ೩೫ ಕ್ಕೂ ಮನೆಗಳ ಕುಸಿತಗೊಂಡಿವೆ ಎಂದು ತಹಸೀಲ್ದಾರ ಅಮರೇಶ ಪಮ್ಮಾರ ತಿಳಿಸಿದ್ದಾರೆ. ಬೂದಿಹಾಳ ಎಸ್.ಕೆ. ಗ್ರಾಮದಲ್ಲಿ ೩, ಬೆನಕನಡೋಣಿ ಗ್ರಾಮದಲ್ಲಿ ೫ , ಹಿರೇಕೊಡಗಲಿ ಗ್ರಾಮದಲ್ಲಿ ೩, ಕಂಬಳಿಹಾಳ ಗ್ರಾಮದಲ್ಲಿ ೧, ತಳ್ಳಿಕೇರಿ ಗ್ರಾಮದಲ್ಲಿ ೭, ಗುಡೂರ ಎಸ್.ಬಿ. ಗ್ರಾಮದಲ್ಲಿ ೧ , ಅಮರವಾಡಗಿ ಗ್ರಾಮದಲ್ಲಿ ೩ , ಕೆಲೂರು ಗ್ರಾಮದಲ್ಲಿ ೬, ಗೊರಜನಾಳ ಗ್ರಾಮದಲ್ಲಿ ೧, ಗುಡೂರ ಎಸ್.ಸಿ. ಗ್ರಾಮದಲ್ಲಿ ೫ ಮನೆಗಳು ಬಿದ್ದಿವೆ ಎಂದು ತಹಸೀಲ್ದಾರ ಕಾರ್ಯಾಲಯದ ಸಿಬ್ಬಂದಿ ಪ್ರಕಾಶ ವಜ್ಜಲ ಸೆ.೨೭ ಮಧ್ಯಾಹ್ನ ೨ ಗಂಟೆಗೆ ಮಾಹಿತಿಯನ್ನು ನೀಡಿದ್ದಾರೆ.
Read More News
T & CPrivacy PolicyContact Us