ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಹಲವು ಅವಘಡಗಳು ಸಂಭವಿಸುತ್ತಿವೆ. ಯಡ್ರಾಮಿ ಪಟ್ಟಣದಲ್ಲಿ ತಡರಾತ್ರಿ 2.30ರ ಸುಮಾರಿಗೆ ಶಿಥಿಲಗೊಂಡ ಮನೆಯ ಗೋಡೆ ಕುಸಿದು ಓರ್ವ ಬಾಲಕಿ ದುರ್ಮರಣ ಹೊಂದಿ, ನಾಲ್ವರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.. ಮೃತ ಬಾಲಕಿಯನ್ನು ಸಾನಿಯಾ ಸೈಪನಸಾಬ್ ತಾಂಬೋಳಿ (17) ಎಂದು ಗುರುತಿಸಲಾಗಿದೆ. ಕಟ್ಟಡದ ಅವಶೇಷದಲ್ಲಿ ಸಿಲುಕಿ ಗಂಭೀರಗಾಯಗೊಂಡ ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಘಟನೆಯಲ್ಲಿ ಅವಳ ಸಹೋದರ-ಸಹೋದರಿಯರಾದ ಮಹಿಬೂಬ್ ತಾಂಬೋಳಿ, ನಿಶಾದ್ ತಾಂಬೋಳಿ, ಆಯಿಷಾ ತಾಂಬೋಳಿ ಹಾಗೂ ರಮಜಾನಬಿ ತಾಂಬೋಳಿ ಕಟ್ಟಡ