ತುಮಕೂರು ಜಿಲ್ಲೆಯ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಅವರು ಆರ್‌ಎಸ್‌ಎಸ್ ಗೀತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ನಮಸ್ತೆ ಸದಾ ವಸ್ತಲೇ" ಗೀತೆಯ ಅರ್ಥ ತನ್ನ ಹುಟ್ಟಿದ ಭೂಮಿಗೆ ನಮಸ್ಕಾರ ಮಾಡುವುದಾಗಿ ತಿಳಿಸಿ, ಅದರಲ್ಲಿ ತಪ್ಪೇನಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. "ನಮ್ಮದು ಜಾತ್ಯಾತೀತ ಪಕ್ಷ, ಯಾವುದೇ ಪಕ್ಷದ ಒಳ್ಳೆಯ ಸಂಗತಿಯನ್ನು ಸ್ವೀಕರಿಸಬೇಕು. ಆದರೆ ಬಲಪಂಥೀಯರು ಧರ್ಮ-ಜಾತಿ ಬೇಧ ಮೂಡಿಸುವ ಪ್ರವೃತ್ತಿ ಹೊಂದಿರುವುದನ್ನು ಖಂಡಿಸುತ್ತೇವೆ" ಎಂದು ಅವರು ಭಾನುವಾರ ಸಂಜೆ 5 ಗಂಟೆಯಲ್ಲಿ ನಗರದಲ್ಲಿ ಸ್ಪಷ್ಟಪಡಿಸಿದರು.