ಬಿಜ್ಹಿ ಲೈಫ್, ಕೆಲಸದ ಒತ್ತಡಗಳ ನಡುವೆ ತಮ್ಮ ಸಂಬಂಧಿಕರ ಜೊತೆಗೆ ಹಬ್ಬದ ಸಂದರ್ಭಗಳಲ್ಲೂ ಒಂದುಗೂಡಿ ಹಬ್ಬವನ್ನು ಆಚರಣೆ ಮಾಡಲು ಆಗದೆ ಮನದಲ್ಲೇ ಪರಿತಪಿಸೋ ಅದೆಷ್ಟೋ ಪೊಲೀಸ್ ಸಿಬ್ಬಂದಿಗಳು ಕಾಣಸಿಗುತ್ತಾರೆ. ಆದರೆ ಇಲ್ಲೊಂದು ಪೊಲೀಸ್ ಠಾಣೆಯಲ್ಲಿ ಮಹಿಳಾ ಸಹ ಸಿಬ್ಬಂದಿಗಳಿಗೆ ಬಾಗಿನ ಕೊಟ್ಟು, ಗೌರಿ ಗಣೇಶ ಹಬ್ಬದ ತವರನ್ನು ಮನೆಯನ್ನ ನೆನಪಿಸೋ ಅತ್ಯಮೂಲ್ಯ ಗಳಿಗೆಗೆ ಬಾಳೆಹೊನ್ನೂರು ಪೊಲೀಸ್ ಠಾಣೆ ಬುಧವಾರ 11ಗಂಟೆ ಸುಮಾರಿಗೆ ಸಾಕ್ಷಿಯಾಯ್ತು. ಠಾಣೆಯ ಮುಖ್ಯಾಧಿಕಾರಿ ರವೀಶ್ ಅವರು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುವ ನಾಲ್ವರು ಸಹ ಮಹಿಳಾ ಸಿಬ್ಬಂದಿಗಳಿಗೆ ಬಾಗಿನ ನೀಡಿ ಗೌರಿ ಗಣೇಶ ಹಬ್ಬದ ಸವಿ ಕಾಣಿಕೆಯನ್ನು ನೀಡುವ ಮೂಲಕ ಠಾಣೆಯಲ್ಲಿ ಹಬ್ಬದ ವಾ