ಯಲ್ಲಾಪುರ : ವಿಶ್ವ ದರ್ಶನದಲ್ಲಿ ರಾಧಾ, ಕೃಷ್ಣ ರ ಕಲರವ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಶ್ವದರ್ಶನ ಕೇಂದ್ರೀಯ ಶಾಲೆಯು ಪೂರ್ವಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಧಾಕೃಷ್ಣ ವೇಷ ಸ್ಪರ್ಧೆಯ ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸ, ಖ್ಯಾತ ತಾಳಮದ್ದಲೆ ಅರ್ಥಧಾರಿ ಎಂ.ಎನ್. ಹೆಗಡೆ ಹಳವಳ್ಳಿ ಮಾತನಾಡಿ. ಕೃಷ್ಣನು ಬಾಲ್ಯದಿಂದ ಹಿಡಿದು ನಿರ್ವಾಣದ ವರೆಗೆ ಜೀವನದಲ್ಲಿ ಮಾಡಿದ ಕೆಲಸಗಳು ಮತ್ತು ಅವನ ಚಿಂತನೆಗಳು ಶ್ರೇಷ್ಠವಾದದ್ದು. ಅವು ನಮಗೆ ಆದರ್ಶವಾಗ ಬೇಕು.ಎಂದರು.ಪುಟಾಣಿ ಗಳ ರಾಧಾ ಕೃಷ್ಣ ವೇಷ ಸ್ಪರ್ಧೆ ಗಮನ ಸೆಳೆಯಿತು.